Journal: Int. J Adv. Std. & Growth Eval.

Mail: allstudy.paper@gmail.com

Contact: +91-9650866419

INTERNATIONAL JOURNAL OF
ADVANCE STUDIES AND GROWTH EVALUATION

Impact factor (QJIF): 8.4  E-ISSN: 2583-6528


Multidisciplinary
Refereed Journal
Peer Reviewed Journal

INTERNATIONAL JOURNAL OF ADVANCE STUDIES AND GROWTH EVALUATION


VOL.: 2 ISSUE.: 9(September 2023)

ತೇಜಸ್ವಿ ಪ್ರೇಮಪತ್ರಗಳು ಮತ್ತು ಸೈದ್ಧಾಂತಿಕತೆಯ ಒಳನೋಟ


Author(s): Prakash B


Abstract:

ಪೂರ್ಣಚಂದ್ರತೇಜಸ್ವಿ ಕನ್ನಡ ಸಾಹಿತ್ಯದ ಅಂಕಿತನಾಮವೂ ಹೌದು,ಅನ್ವರ್ಥನಾಮವೂ ಕೂಡ. ತೇಜಸ್ವಿ ಜೊತೆಗಿನ ಬದುಕಿನ ಸಂದರ್ಭದಲ್ಲಿ ಸತ್ಯಾನ್ವೇಷಣೆ ಎನ್ನುವುದು ಬೇರೆಯದೇ ಎಂದೆನಿಸುತ್ತದೆ. ಪತ್ರದ ಸ್ಥಾನವನ್ನು ದೂರವಾಣಿ ಇ-ಮೇಲ್ ಆಕ್ರಮಿಸಿಕೊಂಡ ಮೇಲೆ ಪತ್ರಲೇಖನವೆಂಬ ವಿಶಿಷ್ಟ ಸಾಹಿತ್ಯ ಪ್ರಕಾರ ಮರೆಗೆ ಸರಿಯುತ್ತಿರುವುದಂತೂ ಸತ್ಯ ಹೌದು. ಪತ್ರಲೇಖನಕ್ಕೂ ಸಾಹಿತ್ಯ ಮೌಲ್ಯವಿದೆ. ವಿಜಯನಗರ ಸಾಮ್ರಾಜ್ಯದ ಮಹಾದಂಡ ನಾಯಕ ಲಕ್ಷ್ಮಣ ದಂಡೇಶ ಕನ್ನಡದ ಚಿನ್ನರಿಗೆ ಬರೆದಂತಿರುವ ಪತ್ರಗುಚ್ಛ ಕನ್ನಡಿಗರಲ್ಲಿ ದೇಶಪ್ರೇಮವನ್ನು ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತದೆ. ಜನಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಾಧನ ಸಂಚಯ ಅಂಕಣ ನಾಡಿನ ಹೆಮ್ಮೆಯ ಸಾಹಿತಿಗಳಾದ ನಿರಂಜನ ಮತ್ತು ಅನುಪಮರವರ ಹಾರ್ದಿಕ ಪ್ರೇಮದ ನವಿರು ಅಭಿವ್ಯಕ್ತಿಯಾಗಿದೆ. ಇಂತಹ ವಿಶಿಷ್ಟ ಮೌಲಿಕ ಬರಹಗಳು ಮೊಬೈಲ್ ಫೋನಿನ ಭರಾಟೆಯಲ್ಲಿ ಮೂಡಿಬರುವುದು ಅಸಂಭವ. ಹಿAದೆಲ್ಲ ಪತ್ರಕ್ಕಾಗಿ ಕಾದು ಕುಳಿತು ಅದು ಕೈ ಸೇರಿದಾಗ ತವಕದಿಂದ ಪಡೆದು ಓದುವ ಸುಖ ಇನ್ನು ಮುಂದೆ ಮರೀಚಿಕೆ. ವಾರಕ್ಕೋ ತಿಂಗಳಿಗೂ ಅದಕ್ಕೂ ಹೆಚ್ಚಿನ ಅಂತರದಲ್ಲಿ ಬರುವ ಪತ್ರಗಳಲ್ಲಿ ಭಾವನೆಗಳು ಸಾಂದ್ರವಾಗಿದ್ದು ಅನುಭವ ಹಾರೈಕೆ ನಿರೀಕ್ಷೆಗಳಿಂದ ಸಮೃದ್ಧವಾಗಿರುತ್ತಿತ್ತು. ಪತ್ರ ಬರೆದವರ ಪ್ರೀತಿಯನ್ನು ಮಮತೆಯನ್ನು ಕಾಳಜಿಯನ್ನು ವಿಶ್ವಾಸವನ್ನು ಮತ್ತೆ ಮತ್ತೆ ಮೆಲುಕುಹಾಕುವಂತಿರುತ್ತಿತ್ತು. ಅವರ ದುಃಖ ದುಮ್ಮಾನಗಳು ನಮ್ಮನ್ನು ತಟ್ಟುತ್ತಿದ್ದವು ಭಾಷೆ ಬನಿಯಾಗಿರುತ್ತಿತ್ತು. ತರ್ಕ ಬದ್ಧವಾದ ವಿಚಾರ ಸರಣಿ ಇರುತ್ತಿತ್ತು. ಬಾಂಧವ್ಯದ ಎಳೆಗಳನ್ನು ಹದವಾಗಿ ಮೀಟಿ ತಂದು ಶ್ರುತಿಗೊಳಿಸಿ ಅವರ ಭಾವನೆ ಪ್ರೀತಿ ವಾತ್ಸಲ್ಯಗಳನೆಲ್ಲ ತಂದು ಇಲ್ಲಿ ಇವರ ಮಡಿಲಲ್ಲಿ ಸುರಿದು ಅವರ ಸಂಭ್ರಮಕ್ಕೆ ಸಾಕ್ಷಿಯಾಗುವ ಓಲೆಗಳೆಲ್ಲ ಮಾಯವಾಗಿವೆ. ಈ ಲೇಖನದ ಮೂಲಕ ಪ್ರೇಮಪತ್ರಗಳ ಮಹತ್ವವನ್ನು ತಿಳಿಸುವುದು ಹಾಗೂ ತೇಜಸ್ವಿ ಅಭಿವ್ಯಕ್ತಿಯಲ್ಲಿನ ತಾತ್ವಿಕತೆಯನ್ನು ವಿವರಿಸಲಾಗಿದೆ.

keywords:

Pages: 24-27     |    3 View     |    0 Download

How to Cite this Article:

Prakash B. ತೇಜಸ್ವಿ ಪ್ರೇಮಪತ್ರಗಳು ಮತ್ತು ಸೈದ್ಧಾಂತಿಕತೆಯ ಒಳನೋಟ. Int. J Adv. Std. & Growth Eval. 2023; 2(9):24-27,