Journal: Int. J Adv. Std. & Growth Eval.

Mail: allstudy.paper@gmail.com

Contact: +91-9650866419

INTERNATIONAL JOURNAL OF
ADVANCE STUDIES AND GROWTH EVALUATION

Impact factor (QJIF): 8.4  E-ISSN: 2583-6528


Multidisciplinary
Refereed Journal
Peer Reviewed Journal

INTERNATIONAL JOURNAL OF ADVANCE STUDIES AND GROWTH EVALUATION


VOL.: 1 ISSUE.: 3(December 2022)

ಭಾರತೀಯ ಮತ್ತುಪಾಶ್ಚಿಮಾತ್ಯ ಕಾವ್ಯಮೀಮಾಂಸೆಯಲ್ಲಿಅನುಕರಣೆ ಪರಿಕಲ್ಪ ವಿಚಾರಿ


Author(s): ಡಾ.ಸಣ್ಣೀರಪ್ಪ ಹಾಲಪ್ಪ ದೊಡ್ಡಮನಿ,


Abstract:

ಅನುವ್ಯವಸಾಯ'-ಎಂದು ಅರ್ಥವತ್ತಾಗಿ ಹೇಳುತ್ತಾನೆ.ಸುಖದುಃಖಸಮನ್ವಿತವಾದ ಮಾನವಸ್ವಭಾವವನ್ನುಅಂಗಿಕಾದಿ ಅಭಿನಯಗಳಿಂದ (ಆಂಗಿಕ, ವಾಚಿಕ, ಸಾತ್ವಿಕ, ಆಹಾರ-ಈ ಚತುರ್ವಿಧ ಅಭಿನಯಗಳಿಂದ) ವ್ಯಕ್ತಪಡಿಸುವುದೇನಾಟಕವೆನಿಸಿಕೊಳ್ಳುತ್ತದೆ. ಲೋಕಸ್ವಭಾವ ವೈಯಕ್ತಿಕವಾಗಿ ಬೇರೆಬೇರೆಯಾದದ್ದು; ಸುಖ ದುಃಖಗಳಿಂದ ಕೂಡಿದ್ದು. ಈ ನಾನಾ ಸ್ವಭಾವಗಳನ್ನುಅಭಿನಯಗಳಿಂದ ಅನುಕರಿಸುತ್ತದೆ ನಾಟಕ. ಧನಂಜಯ ತನ್ನ 'ದಶರೂಪಕ'ದಲ್ಲಿ,: “ಅವಸ್ಥಾನುಕೃತಿರ್ನಾಟ್ಯಂ’ ಎಂಬ ಆ ಸೂತ್ರ, ಭರತನ ಎಲ್ಲ ಅಭಿಪ್ರಾಯಗಳನ್ನೂಸಾರವತ್ತಾಗಿ ಒಳಗೊಂಡಿದೆ. ಭರತ ಹೇಳಿದ 'ನಾನಾವಸ್ಥಾಂತರಾತ್ಮಕಂ ಲೋಕವೃತ್ತಾನುಕರಣಂ' ಎಂಬ ಮಾತುಗಳ ನೇರವಾದ ಪ್ರತಿಧ್ವನಿಯಾಗಿದೆ ಈ ಸೂತ್ರ. ಅರಿಸ್ಟಾಟಲನ ರುದ್ರನಾಟಕಗಳಲ್ಲಿಬರುವ ಅನುಕರಣೆ, ವ್ಯಕ್ತಿಮತ್ತುಘಟನಾ ಪ್ರಧಾನವಾದದ್ದು. ಮುಖ್ಯವಾಗಿ ಒಬ್ಬ ವ್ಯಕ್ತಿಯ ಕ್ರಿಯೆ, ಅದಕ್ಕೆಕಾರಣವಾದ ಮತ್ತುಅದರ ಪರಿಣಾಮವಾದ ಘಟನಾಪರಂಪರೆಗಳು ಇಲ್ಲಿಮುಖ್ಯವಾಗುತ್ತವೆ. ಆದರೆ ಭರತನಲ್ಲಿಆಲೋಚನೆಗಳು, ಭಾವನೆಗಳು, ಕ್ರಿಯೆಗಳು ಈ ಎಲ್ಲಕ್ಕೂಪ್ರಾಧಾನ್ಯ ಲಭಿಸುತ್ತದೆ. ಜೀವನದ ದೃಷ್ಟಿಮತ್ತುಧೋರಣೆಗಳನ್ನುಕುರಿತು ಈ ಇಬ್ಬರಲ್ಲಿಇರುವ ಅಂತರ, ಈ ಕಲಾಕೃತಿಗಳ ಸ್ವರೂಪನಿರ್ಣಯದ ವಿಚಾರದಲ್ಲಿಯೂ ಸ್ವಲ್ಪಮಟ್ಟಿನ ವಿಭಿನ್ನತೆಗೆ ಕಾರಣವಾಗುತ್ತದೆ.'ನಂಬಲಾಗುವ ಅಸಾಧ್ಯತೆ' (Convincing Impossibility);;ಕಾವ್ಯದಲ್ಲಿಬರುವ ಘಟನೆಗಳು ಲೋಕದಲ್ಲಿನಡೆದ ಘಟನೆಗಳೇಆಗಬೇಕಾಗಿಲ್ಲ. ಅವು ಲೋಕದಲ್ಲಿನಡೆಯದೇಇರಬಹುದು. ಆದರೆ ಹೀಗೆ ನಡೆಯುವುದು ಸಾಧ್ಯ, ಮತ್ತುಹೀಗೇನಡೆಯಬೇಕು ಎಂದು ಕಾವ್ಯಸತ್ಯದ ಸೂತ್ರಕ್ಕೆಅನ್ನಿಸುವಂತಿರಬೇಕು. ಇದನ್ನೇ'ನಂಬಲಾಗುವ ಅಸಾಧ್ಯತೆ' (Convincing Impossibility) ಎನ್ನುತ್ತಾನೆ.Tragedy is an imitation of an action that is serious, complete, and of a certain magnitude

keywords:

Pages: 25-28     |    2 View     |    0 Download

How to Cite this Article:

ಡಾ.ಸಣ್ಣೀರಪ್ಪ ಹಾಲಪ್ಪ ದೊಡ್ಡಮನಿ,. ಭಾರತೀಯ ಮತ್ತುಪಾಶ್ಚಿಮಾತ್ಯ ಕಾವ್ಯಮೀಮಾಂಸೆಯಲ್ಲಿಅನುಕರಣೆ ಪರಿಕಲ್ಪ ವಿಚಾರಿ. Int. J Adv. Std. & Growth Eval. 2022; 1(3):25-28,