Journal: Int. J Adv. Std. & Growth Eval.

Mail: allstudy.paper@gmail.com

Contact: +91-9650866419

INTERNATIONAL JOURNAL OF
ADVANCE STUDIES AND GROWTH EVALUATION

Impact factor (QJIF): 8.4  E-ISSN: 2583-6528


Multidisciplinary
Refereed Journal
Peer Reviewed Journal

INTERNATIONAL JOURNAL OF ADVANCE STUDIES AND GROWTH EVALUATION


VOL.: 4 ISSUE.: 8(August 2025)

ಜನಾಂಗ, ಧರ್ಮ ಮತ್ತು ಕುಲದೇವತಾರಾಧನೆ


Author(s): ಡಾ. ರಂಗಲಕ್ಷಿ ಪಿ. ಎ.


Abstract:

ನಿಸರ್ಗಕ್ಕೆ ತೀರಾ ಸಮೀಪವಾದ ಈ ಜನಪದ ಧರ್ಮವೆಂಬುದು ಮಾನವನ ಒಂದು ನಂಬಿಕೆ. ಪ್ರಕೃತಿಗೆ ಜೀವವಿದೆ ಎಂದೂ ಅದರಲ್ಲಿನ ಪ್ರತಿಯೊಂದು ವಸ್ತುವಿನಲ್ಲೂ ಚೈತನ್ಯವಿದೆ ಎಂದೂ ಧರ್ಮ ಹುಟ್ಟಿಕೊಂಡಿದೆ ಎಂದು ಟಾಯ್ಲರ್ ಎಂಬುವವರು ವಾದಿಸತೊಡಗಿದರು. ‘ ದೇವರು ಮತ್ತು ಭೂತಗಳು ಎನ್ನುವ ಎರಡು ಪಂಗಡಗಳನ್ನು ಈ ಚೈತನ್ಯಗಳಲ್ಲಿ ಭಾಗ ಮಾಡಿ ಪೂಜಾಕ್ರಮ ಪ್ರಾರಂಭವಾಯಿತೆAದು ಆ ಪೂಜಾ ಕ್ರಿಯಾವಿಧಿಗಳು ಧರ್ಮವೆನಿಸಿಕೊಂಡವೆAದು ಪ್ರತಿಪಾದಿಸಿದ್ದಾರೆ. ದೇವರಿಗೂ, ಧರ್ಮಕ್ಕೂ ಅಂತರವಿಲ್ಲ. ಅವೆರಡೂ ಒಂದು ನಾಣ್ಯದ ಎರಡು ಮುಖಗಳು. ಅವೆರಡೂ ಒಂದರೊಳಗೊAದು ಬೆರೆತುಕೊಂಡಿವೆ. ಕ್ರಿಯಾವಿಧಿಗಳು, ಹಬ್ಬ ಹರಿದಿನಗಳು, ದೈವಗಳ ಒಲುಮೆಗಾಗಿಯೇ ನಡೆಯುತ್ತ ಬಂದಿದೆ. ಜನಪದ ಧರ್ಮದೊಂದಿಗೆ ಮಾಯ, ಮಾಟ, ಮಂತ್ರಗಳಿಗೆ ಪ್ರಾಧಾನ್ಯ ಹೆಚ್ಚು. ಅವುಗಳ ಆಚರಣೆಯಲ್ಲಿ ವಿಚಾರ, ಭಾವನೆ, ನಂಬಿಕೆ ಅಗತ್ಯವಾಗಿ ಬೇಕೇ ಬೇಕು. ಈ ಎಲ್ಲಾ ಕ್ರಿಯಾ ವಿಧಿಗಳನ್ನು ಹಿರಿಯರಾದವರು ಕಿರಿಯರಿಗೆ ಕಲಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಹೊಸ ಪೀಳಿಗೆಗೆ ಹಳೆಯ ಪೀಳಿಗೆಯವರು ತಮ್ಮ ಧರ್ಮವನ್ನು ತಿಳಿಯಪಡಿಸುವುದರಿಂದ ಸಮಾಜದ ವ್ಯಕ್ತಿ ವ್ಯಕ್ತಿಗಳಲ್ಲಿ ನೈತಿಕ ಹಾಗೂ ಧಾರ್ಮಿಕ ದೃಷ್ಟಿ ಬೆಳೆದು ಬರುವುದು ಸಹಜವಾಗಿದೆ. ಕುಲ ಹಾಗು ಕುಲದೇವತಾರಾಧನೆಯನ್ನು ಕುರಿತು ಮಾತಾಡುವುದಾದರೆ, ಇಂಗ್ಲೀಷಿನ ಐಚಿಟಿ ಎಂಬ ಶಬ್ದಕ್ಕೆ ಸಂವಾದಿಯಾಗಿ ಕುಲ ಅಥವಾ ಬುಡಕಟ್ಟು ಎಂಬ ಪದವನ್ನು ಬಳಸುತ್ತಾರೆ. ಇದು ಬಂಧುತ್ವದ ಗುಂಪುಗಳಲ್ಲಿ ಒಂದೆನ್ನಬಹುದು. ತನ್ನ ವ್ಯಾಪ್ತಿಯ ಜನಮಾನಸಕ್ಕೆ ಗಟ್ಟಿ ನೆಲೆಯನ್ನು ಒದಗಿಸುವ ಹೊಣೆಗಾರಿಕೆ ಕುಲದ್ದು, ತೊಂದರೆಯಲ್ಲಿರುವವರನ್ನ ರಕ್ಷಿಸುತ್ತದೆ. ತನ್ನ ಸದಸ್ಯರಿಗೆ ತೊಂದರೆಯಾದರೆ ಇಡೀ ಬುಡಕಟ್ಟಿನವರು ಸಹಕರಿಸುತ್ತಾರೆ. ಒಗ್ಗಟ್ಟಿನ ಮೂಲಕ ತಮ್ಮ ನೆರವನ್ನು ನೀಡುತ್ತಾರೆ. ತನ್ನ ಗುಂಪಿನವರದು ತಪ್ಪಾಗಿದ್ದರೆ ಅನ್ಯ ಗುಂಪಿನವರೆದುರು ತನ್ನವನನ್ನು ಬಿಟ್ಟು ಕೊಡದೆ ಸಮರ್ಥಿಸಿಕೊಳ್ಳುವ ಗುಣ ಈ ಕುಲ ವ್ಯವಸ್ಥೆಗಿರುತ್ತದೆ. ಹಾಗೆಯೇ ಇದರ ಕಟ್ಟು ಪಾಡುಗಳು ಬಿಗಿಯಾಗಿರುತ್ತವೆ. ಕುಲದ ನೀತಿ ನಿಯಮಗಳಿಗೆ ಯಾರು ವಿರುದ್ದವಾಗಿರುತ್ತಾರೋ ಅಂಥವರನ್ನು ಕುಲದಿಂದ ಹೊರಹಾಕುವ ಪದ್ದತಿ ಇದೆ. ಕುಟುಂಬದ ಜೊತೆಯಲ್ಲಿ ಇದನ್ನು ಹೋಲಿಸಿನೋಡಿದಾಗ ಕುಟುಂಬದ ವ್ಯಾಪ್ತಿಗಿಂತ ಕುಲದ ವ್ಯಾಪ್ತಿ ದೊಡ್ಡದು, ಭಿನ್ನಗೋತ್ರ ವಿವಾಹ ಪದ್ದತಿ ಇದರಲ್ಲಿ ಜಾರಿಯಲ್ಲಿರುವುದರ ಜೊತೆಗೆ ಕುಲದೈವವನ್ನು ಒಳಗೊಂಡಿರುತ್ತದೆ.

keywords:

Pages: 114-117     |    1 View     |    0 Download

How to Cite this Article:

ಡಾ. ರಂಗಲಕ್ಷಿ ಪಿ. ಎ.. ಜನಾಂಗ, ಧರ್ಮ ಮತ್ತು ಕುಲದೇವತಾರಾಧನೆ. Int. J Adv. Std. & Growth Eval. 2025; 4(8):114-117,