Journal: Int. J Adv. Std. & Growth Eval.
Mail: allstudy.paper@gmail.com
Contact: +91-9650866419
Impact factor (QJIF): 8.4 E-ISSN: 2583-6528
INTERNATIONAL JOURNAL OF ADVANCE STUDIES AND GROWTH EVALUATION
VOL.: 4 ISSUE.: 10(October 2025)
Author(s): Mallappa
Abstract:
ಔಚಿತ್ಯ'ತತ್ವ ಪ್ರಾಚೀನ ಆಲಂಕಾರಿಕರಲ್ಲಿಯೇ ಬಹಳ ಸ್ಪಷ್ಟವಾಗಿ ಕಂಡು ಬರುತ್ತದೆ. ಆದರೆ ಆ ಹೆಸರು ಕಾವ್ಯಮೀಮಾಂಸೆಗೆ ಸಂಬಂಧಿಸಿದಂತೆ ಮೊಟ್ಟಮೊದಲು 1 ಸಿಕ್ಕುವುದು ಈಗ ತಿಳಿದಿರುವಂತೆ ಯಶೋವರ್ಮನ ರಾಮಾಭ್ಯುದಯ ನಾಟಕದಲ್ಲಿ. ಆ ಗ್ರಂಥ ಸಿಕ್ಕಿಲ್ಲ. ಆದರೆ ಭೋಜ ಆ ನಾಟಕದ ಪ್ರಸ್ತಾವನೆಯಲ್ಲಿ ಬಂದಿರಬಹುದಾದ ಒಂದು ಪದ್ಯವನ್ನು ಉದಾಹರಿಸಿದ್ದಾನೆ.ಔಚಿತ್ಯ' ತನಗೆ ತಾನೇ ಇರುವ ಮೂಲತತ್ವವಲ್ಲ. ಇದಕ್ಕೆ ಇತರ ಮೂಲವಸ್ತುಗಳು ಬೇಕು. ಔಚಿತ್ಯ ಮುಖ್ಯವೆಂಬುದೇನೋ ಸರಿ. ಇದನ್ನು ಗಮನಿಸಿ ಕೆಲ ಲಾಕ್ಷಣಿಕರು ರಸಕ್ಕಿಂತ ಹೆಚ್ಚಾಗಿ ಇದನ್ನೇ ಕಾವ್ಯದ ತಿರುಳು ಎಂದು ಹೇಳುತ್ತಿದ್ದಂತೆ ತೋರುತ್ತದೆ. ಅದನ್ನು ಗಮನಿಸಿದ ಅಭಿನವಗುಪ್ತ ಎರಡು ಕಡೆಯಲ್ಲಿ ಈ ಅಭಿಪ್ರಾಯವನ್ನು ವಿಮರ್ಶಿಸಿದ್ದಾನೆ ಔಚಿತ್ಯ ಎನ್ನುವುದನ್ನು ಇತರ ಪರಿಕರಗಳಿಂದ ಹೊರತಾಗಿ ತನಗೆ ತಾನೇ ಎಂಬಂತೆ ಸ್ವತಂತ್ರವಾಗಿ ಉಪಯೋಗಿಸುವಂತಿಲ್ಲ. ಯಾವುದರಲ್ಲಿ ಔಚಿತ್ಯ ಬೇಕು ಎಂಬುದನ್ನು, ಯಾವುದಕ್ಕಾಗಿ ಔಚಿತ್ಯವಿರಬೇಕು ಎಂಬುದನ್ನು, ಮೊದಲು ಗ್ರಹಿಸಬೇಕು.ತಿಲಕದಂತಿರುವ ಒಂದೇ ಉಚಿತವಾದ ಪದವನ್ನೊಳಗೊಂಡ ಸೂಕ್ತಿಯು ಕೂಡ ಕಸ್ತೂರಿಯ ತಿಲಕವನ್ನಿಟ್ಟುಕೊಂಡ ಚಂದ್ರಾನನೆಯಂತೆಯೂ, ಶ್ರೀಗಂಧದ ತಿಲಕವನ್ನಿಟ್ಟು, ಕೊಂಡ ಶ್ಯಾಮಲ ಯುವತಿಯಂತೆಯೂ ಶೋಭಿಸುತ್ತದೆ”
keywords:
Pages: 33-43 | 2 View | 0 Download
How to Cite this Article:
Mallappa. ಭಾರತೀಯ ಮತ್ತು ಪಾಶ್ಚಿಮಾತ್ಯ ಕಾವ್ಯ ತತ್ತ್ವವಿಚಾರದಲ್ಲಿಯ ಔಚಿತ್ಯ ತತ್ತ್ವದ ತೌಲನಿಕವಿಮರ್ಶೆ. Int. J Adv. Std. & Growth Eval. 2025; 4(10):33-43,