Journal: Int. J Adv. Std. & Growth Eval.

Mail: allstudy.paper@gmail.com

Contact: +91-9650866419

INTERNATIONAL JOURNAL OF
ADVANCE STUDIES AND GROWTH EVALUATION

Impact factor (QJIF): 8.4  E-ISSN: 2583-6528


Multidisciplinary
Refereed Journal
Peer Reviewed Journal

INTERNATIONAL JOURNAL OF ADVANCE STUDIES AND GROWTH EVALUATION


VOL.: 4 ISSUE.: 1(January 2025)

ಭಾರತೀಯ ಹಾಗೂ ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆಯಲ್ಲಿ ರೀತಿ, ಮಾರ್ಗ, ಶೈಲಿ, ಶಯ್ಯೆ ಪಾಕ, ವೃತ್ತಿ,ಪ್ರವೃತ್ತಿ ಪರಿಕಲ್ಪನೆಗಳ ತೌಲನಿಕ ವಿಮರ್ಶೆ


Author(s): Mallappa


Abstract:

ರೀತಿ ಪ್ರಸ್ಥಾನದವರು ಕಾವ್ಯರಹಸ್ಯವನ್ನು ತಿಳಿಯುವಲ್ಲಿ ಅಲಂಕಾರ ಪ್ರಸ್ಥಾನದವರಿಗಿಂತ ಮುಂದುವರಿದರಾದರೂ ಅವರ ಪರಿಕರಗಳೂ ಸೀಮಿತವಾಗಿದ್ದವು. ವೇಷವಿನ್ಯಾಸಕ್ರಮವು ಪ್ರವೃತ್ತಿ: ವಿಲಾಸವಿನ್ಯಾಸಕ್ರಮ ವೃತ್ತಿ; ವಚನ ವಿನ್ಯಾಸಕ್ರಮ ರೀತಿ.“ಭಗವಂತನ ಹೆಜ್ಜೆಗಳು ಭೂಮಿಗೆ 'ಅತಿಭಾರ' ಆದುದಕ್ಕೆ 'ಭಾರತೀ' ಎಂದೂ ಕೇಶಪಾಶ ಕಟ್ಟಿದ್ದಕ್ಕೆ 'ಕೈಶಿಕೀ' ಎಂದೂ ಗುರಿತಪ್ಪದ ಸತ್ವಶಾಲಿ ಬಾಣಗಳನ್ನು ಬಿಟ್ಟಿದ್ದಕ್ಕೆ ಸಾತ್ವತೀ ಎಂದೂ ಚಿತ್ರವಿಚಿತ್ರ ಹೋರಾಟದ ಫಲಕ್ಕೆ ಆರಭಟೀ ಎಂದೂ ಭರತ ಹೇಳಿದ್ದಾನೆ.ಸ್ಟೈಲ್ ಎಂದರೆ ಉಡುಗೆಯಲ್ಲ; ಅದು ದೇಹದ ರಕ್ತಮಾಂಸಗಳಿದ್ದಂತೆ ಎಂಬ ಮಿಥ್ಲೆಟನ್ ಮುರೆಯ ಮಾತಿನಲ್ಲಿ ಸಾವಯವ ಸಂಬಂಧವೇ ಶೈಲಿಯೆಂಬ ಮಾತಿನ ಸಮರ್ಥನೆಯಿದೆ.ಅಲಂಕಾರ ಶಾಸ್ತ್ರದಲ್ಲಿ ಪಾಕ'ವೆಂಬ ಮತ್ತೊಂದು ವಿಶಿಷ್ಟ ಪದದ ಉಪಯೋಗ ಬಹುಕಡೆ ಕಂಡುಬರುತ್ತದೆ. ವಾಮನನು ಅದನ್ನು ಪದಗಳ ಪರಿವೃತ್ತಿ ಇಲ್ಲದುದು ಪಾಕವೆಂದು ಹೇಳುತ್ತಾನೆ. ಆಲಂಕಾರಿಕರು ಹಲವು ಬಗೆಯ ಪ್ರಕಾರದ ಪಾಕಗಳನ್ನು ತಿಳಿಸುವರು. ಅವುಗಳಲ್ಲಿ ಮುಖ್ಯವಾದವು, ನಾರೀಕೇಳಪಾಕ, ಕ್ರಮುಕಪಾಕ, ಕದಳೀಪಾಕ, ಮೃದ್ವೀಕ ಮೊದಲಾದವು.

keywords:

Pages: 01-06     |    3 View     |    1 Download

How to Cite this Article:

Mallappa. ಭಾರತೀಯ ಹಾಗೂ ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆಯಲ್ಲಿ ರೀತಿ, ಮಾರ್ಗ, ಶೈಲಿ, ಶಯ್ಯೆ ಪಾಕ, ವೃತ್ತಿ,ಪ್ರವೃತ್ತಿ ಪರಿಕಲ್ಪನೆಗಳ ತೌಲನಿಕ ವಿಮರ್ಶೆ. Int. J Adv. Std. & Growth Eval. 2025; 4(1):01-06,